Monday, March 17, 2008

ಒಂದು ಇಲಿಯ ಕಥೆ

ಒಂದು ಸೊಗಸಾದ ಸಂಜೆ, ಇನ್ನೇನು ಮಳೆ ಬರತ್ತೋ ಯೇನೋ ಅನ್ನೋಹಾಗಿತ್ತು. ಒಂದು ಇಲಿ, ತನ್ನ ಬಿಲದಿಂದ ಮೆತ್ತಗೆ ಹೊರ ಬಂತು. ಅದು ಅಷ್ಟೇನು ಚುರಕಾಗಿರಲಿಲ್ಲ. ಒಂದು ಸರ್ತಿ ಅತ್ತ-ಇತ್ತ ನೋಡಿತು. ರಸ್ತೆಯ ಬದಿಯಲ್ಲಿತ್ತು ಅದರ ಬಿಲ. ರಸ್ತೆ ತುಂಬ ವಾಹನಗಳು. ನಿಧಾನವಾಗಿ ರಸ್ತೆಯ ಮತ್ತೊಂದು ಬದಿಯತ್ತ ಹೋಗಲು ಪ್ರಯತ್ನಿಸುತ್ತಾ ಇತ್ತು. 3 ಕಾರುಗಳು ಇನ್ನೇನು ಅದರ ಮೇಲೆ ಹೋಗಬೇಕು ಅನ್ನೋಅಷ್ಟರಲ್ಲಿ ಅದು ಬಚಾವು ಆಯ್ತು. ಅಷ್ಟು ಆದ್ರೂ ಅದು ಮುಂದಿನ ಹೆಜ್ಜೆ ಇಡಬೇಕಾದರೆ ಹುಷ್ಷಾರ್ ಆಗಿ ಇಡಲಿಲ್ಲ. ಪರಿಣಾಮ - 4ನೆಯ ಕಾರು ಅದರ ಮೇಲೇರಿ ಹೊಯ್ತು... ಅದು ವಿಲಿ ವಿಲಿ ಒದ್ದಾಡೋದನ್ನ ನನ್ನಿಂದ ನೋಡಲು ಆಗ್ಲಿಲ್ಲ.

ನಮ್ಮ ಜೀವನ ಕೂಡ ಅಷ್ಟೇ ಅಲ್ವಾ? ಬದಕು ಅನ್ನೋ ದಾರಿ, ಗೆಲವಿನತ್ತ ಪಯಣ, ನಾವು ಪಯಣಿಗರು. ತಪ್ಪು ಹೆಜ್ಜೆ ಇಟ್ಟ್ರೆ ಸೋಲು ಎಂಬುದು ನಮ್ಮನ್ನು ತುಳಿದು ಪಚಡಿ ಮಾಡಿ ಬಿಡುತ್ತದೆ

1 comment:

Parisarapremi said...

ಇಲಿಯ ಹಣೆಬರಹವೇ ಅಷ್ಟು ಬಿಡೋ.. ಆದ್ರೂ ಗಣೇಶ ಮಾತ್ರ ಇಲಿಯನ್ನು ಬಿಟ್ಟಿಲ್ಲ ನೋಡು.